Connect with us

ಬೆಂಗಳೂರು

ನಾನು ನಂದಿನಿ ಜೊತೆ ರೀಲ್ಸ್‌ ಮಾಡಿದ ಶಿವರಾಜ್‌ ಕುಮಾರ್‌

Published

on

ಬೆಂಗಳೂರು,ಅ 12(Zoom Karnataka): ನನ್ನ ಹೆಸರು ಮುದ್ದುಕುಮಾರ ಅಂತ ಈ ಹಿಂದೆ ಆನ್‌ ಲೈನ್‌ ಗೇಮಿಂಗ್‌ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ರೀಲ್ಸ್‌ ನೊಂದಿಗೆ ವಿಕ್ಕಿ ಅಲಿಯಾಸ್‌ ವಿಕಾಸ್ ಬಂದಿದ್ದರು. ನಂತರ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ..’ ಮೂಲಕ ವಿಕ್ಕಿ ಸಾಕಷ್ಟು ಜನಪ್ರಿಯತೆ ಪಡೆದರು. ಎಲ್ಲಾ ಕಡೆಗಳಲ್ಲಿ ಈ ಹಾಡೇ ಕೇಳಿತು. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಬೇರೆ ಬೇರೆ ಸಾಹಿತ್ಯದೊಂದಿಗೆ ವೈರಲ್ ಮಾಡಲಾಯಿತು. ಈಗ ವಿಕ್ಕಿ ಅವರು ಶಿವರಾಜ್​ಕುಮಾರ್ ಜೊತೆ ಹೊಸ ವಿಡಿಯೋ ಮಾಡಿದ್ದಾರೆ. ಹಾಗಂತ ಇದು ‘ನಾನು ನಂದಿನಿ..’ ಹಾಡಲ್ಲ. ‘ಘೋಸ್ಟ್’ ಚಿತ್ರದ ಥೀಮ್​ನಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಫ್ಯಾನ್ಸ್ ಇದನ್ನು ಸಖತ್ ಇಷ್ಟಪಡುತ್ತಿದ್ದಾರೆ.ಶಿವರಾಜ್​ಕುಮಾರ್ ಅವರು ‘ಘೋಸ್ಟ್’ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಿದ್ದಾರೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading