ಬೆಂಗಳೂರು ಸೆ 26,(Zoom Karnataka) : ಬಿಗ್ ಬಾಸ್ ಕಾರ್ಯಕ್ರಮ ಖ್ಯಾತಿಯ ಭೂಮಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಭೂಮಿ ಶೆಟ್ಟಿ ತುಂಬಾ ಸಣ್ಣ ಆಗಿದ್ದಾರೆ. ಗ್ಲಾಮರಸ್ ಟಚ್ ಕೂಡ ಬಂದಿದೆ. ಈ ಮೂಲಕ ಭೂಮಿ ಹೊಸ ರೀತಿ ಗಮನ ಸೆಳೆಯುತ್ತಿದ್ದಾರೆ. ಭೂಮಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೈಯಲ್ಲಿ ಸಿಗರೇಟು ಹಿಡಿದು ಪೋಸ್ ಕೊಟ್ಟ ತಮ್ಮ ವಿಶೇಷ ಕ್ಷಣದ ಫೋಟೋ ಮತ್ತು ವಿಡಿಯೋಗಳನ್ನ ಹಂಚಿಕೊಳ್ತಾನೇ ಇರ್ತಾರೆ. ಅದೇ ರೀತಿ ತಮ್ಮ ಹೊಸ ರೀತಿಯ ಫೋಟೋಗಳನ್ನ ಹಂಚಿಕೊಂಡು ಖುಷಿಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಭೂಮಿ ಶೆಟ್ಟಿ ಒಂದು ಸಿನಿಮಾ ಒಪ್ಪಿಕೊಂಡಿದ್ದರು. ಕೆಂಡದ ಸೆರಗು ಅನ್ನುವ ಈ ಚಿತ್ರದಲ್ಲಿ ಭೂಮಿ ಶೆಟ್ಟಿ, ಕುಸ್ತಿ ಪಟು ಪಾತ್ರವನ್ನೆ ಮಾಡಿದ್ದರು. ರಿಯಲ್ ಆಗಿಯೇ ಕುಸ್ತಿಯನ್ನ ಕಲಿತುಕೊಂಡು ಈ ಚಿತ್ರದಲ್ಲಿ ಭೂಮಿ ಪಾತ್ರವನ್ನ ನಿರ್ವಹಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆ ಮೇಲೆ ಬರಲಿದೆ ಎನ್ನಲಾಗಿದೆ.