Connect with us

ಬೆಂಗಳೂರು

ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಡಿಕ್ಕಿ ಹೊಡೆದ ಡಿಂಪಲ್ ಕ್ವೀನ್ ಕಾರು; ಸೌಜನ್ಯ ತೊರೆದು ಹೊರಟು ಹೋದ ರಚಿತಾ ರಾಮ್​

Published

on

ಬೆಂಗಳೂರು,ಆ 15(Zoom Karnataka): 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಂದು ಲಾಲ್‌ಬಾಗ್‌ಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅತಿಥಿಯಾಗಿ ಭೇಟಿ ನೀಡಿದ್ದರು. ಫ್ಲವರ್ ಶೋನಲ್ಲಿ ಒಂದು ರೌಂಡ್ ಹಾಕಿದ ನಟಿ ರಚಿತಾ ರಾಮ್​​ ಹೂಗಳ ಅಲಂಕಾರ ಕಣ್ತುಂಬಿಕೊಂಡರು.

ಇದೇ ವೇಳೆ ನಟಿ ರಚಿತಾ ರಾಮ್ ಪ್ರಯಾಣಿಸುತ್ತಿದ್ದ ಕಾರು ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದಾಗ ನಟಿ ರಚಿತಾ ರಾಮ್ ಕಾರಿನಲ್ಲಿ ಕುಳಿತುಕೊಂಡಿದ್ದರು. ಆದರೆ ಏನೂ ಆಗಿಲ್ಲ ಎನ್ನುವಂತೆ ಪ್ಲವರ್ ಶೋನತ್ತ ಹೋಗಿದ್ದಾರೆ. ಬಳಿಕ ಕಾರನ್ನು ನಿಲ್ಲಿಸದೇ ಕ್ಷಮೆಯನ್ನು ಕೇಳದೆ ಅಲ್ಲಿಂದ ಹೊರಟು ಹೋಗಿದ್ದಾರೆ. ಆದರೆ ನಟಿ ಹಾಗೂ ಕಾರು ಚಾಲಕನ ಈ ರೀತಿಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVT


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading