ಉಳ್ಳಾಲ ಜು,23 (Zoomkarnataka) ದುರ್ಗಾ ಫ್ರೆಂಡ್ಸ್ (ರಿ) ಉಳ್ಳಾಲ ಇದರ
20ನೇ ವರ್ಷದ ಸವಿನೆನಪಿಗಂಳದ ವಿಂಶತಿ ಸಂಭ್ರಮದ ಪ್ರಯುಕ್ತ “ಒಂದು ಮರ ಒಂದು ವಿಶ್ವ”
ಸಸಿ ನೆಡುವ ಕಾರ್ಯಕ್ರಮ ಇಂದು ಉಳ್ಳಾಲ ಆರಕ್ಷಕ ಠಾಣೆಯ ಆವರಣದಲ್ಲಿ ಜರುಗಿತು,ಪರಿಸರ ಪ್ರೇಮಿ ಉಳ್ಳಾಲದ ಸಾಲುಮರದ ತಿಮ್ಮಕ್ಕ ಖ್ಯಾತಿಯ ನಮ್ಮೂರಿನ ಹೆಮ್ಮೆಯ ಸುಪುತ್ರ ಶ್ರೀ ಮಾಧವ ಉಳ್ಳಾಲರವರ ಮಾರ್ಗದರ್ಶನದಲ್ಲಿ ನೆರವೇರಿತು,
ಕಾರ್ಯಕ್ರಮದಲ್ಲಿ ಉಳ್ಳಾಲದ ಆರಕ್ಷಕ ಠಾಣೆಯ ಎಸ್.ಐ ಶ್ರೀ ಧನ್ ರಾಜ್. ಶ್ರೀ ಸಂತೋಷ್ ಕುಮಾರ್,ASI ಶ್ರೀ ರಾಮಣ್ಣ ಶೆಟ್ಟಿ, ಶ್ರೀ ಸುನೀಲ್ ಕುಮಾರ್, ಅರಣ್ಯಾಧಿಕಾರಿಗಳಾದ ರೇಂಜರ್. ಶ್ರೀ ಪ್ರಶಾಂತ್ ಪೈ, ಡೆಪ್ಯುಟಿ ರೇಂಜರ್ ಶ್ರೀ ಮಹಾಬಲ. ಶಿವಾಜಿ ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಪುತ್ರನ್, ಬಿಜೆಪಿ ಮಂಗಳೂರು ಮಂಡಲ OBC ಉಪಾಧ್ಯಕ್ಷ ಶ್ರೀ ರಾಜೇಶ್ ಉಳ್ಳಾಲ್. ಉದಯ್ ಉಳ್ಳಾಲ್ (R.K). ಕ್ರಷ್ಣಣ್ಣ,ಮನೋಹರ ಭವನ,ಸುರೇಶ್ ಕುಮಾರ್,ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಉಳ್ಳಾಲ ಇದರ ಅಧ್ಯಕ್ಷರಾದ ಶ್ರೀ ಸುನೀಲ್,
ದುರ್ಗಾ ಫ್ರೆಂಡ್ಸ್ (ರಿ) ಇದರ ಅಧ್ಯಕ್ಷರಾದ ಶ್ರೀ ಲತೇಶ್ ಉಳ್ಳಾಲ್ ಹಾಗೂ ಪದಾಧಿಕಾರಿಗಳು, ಸದಸ್ಯರು,ಉಳ್ಳಾಲ ಆರಕ್ಷಕ ಠಾಣೆಯ ಸಿಬ್ಬಂದಿಗಳು, ಉಪಸ್ಥಿತರಿದ್ದರು.ಶ್ರೀ ಜಗದೀಶ್ ಗೋಳಿಯಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು