ಬಂಟ್ವಾಳ ಜು.22(Zoomkarnataka) : ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಕಲಿ ನಿವೇಶನಕ್ಕೆ ಹಕ್ಕು ಪತ್ರ ನೀಡಿಲು ಒಮ್ಮತದ ನಿರ್ಧಾರವನ್ನು ಸೂಚಿಸಿದ ಅದೇ ಗ್ರಾಮದಲ್ಲಿ 4 ಮಂದಿ ಬಿಜೆಪಿ ಬೆಂಬಲಿತ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕು.
ಕುಕ್ಕಿಪಾಡಿಯ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆಗೆ ಅಂದಾಜು 36 ವರ್ಷ ಪ್ರಾಯ, ಬೇರೆ ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಕುಕ್ಕಿಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮದುವೆಯಾಗಿ ಬಂದು ಅಂದಾಜು 10 ವರ್ಷಗಳಾದವು, ಗಂಡನ ಮನೆಯ ಕುಟುಂಬ ಸಮೇತ ಕುಕ್ಕಿಪಾಡಿಯಲ್ಲಿ ಮನೆಯ ಕದಾ ಸಂಖ್ಯೆ 2-80 ರಲ್ಲಿ ಒಂದೇ ಮನೆಯಲ್ಲಿ ವಾಸವಾಗಿರುತ್ತಾರೆ.
ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ್ ಸದಸ್ಯೆಯಾಗುತ್ತಾರೆ.
ಬಡವರರಿಗೆ ಮನೆ ನಿರ್ಮಾಣಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಬಂಟ್ವಾಳ ಬಿಜೆಪಿಯ ಭ್ರಷ್ಟಾಚಾರದ ಅಕ್ರಮ ಸಕ್ರಮದಡಿಯಲ್ಲಿ 1.07 ಎಕರೆ ಜಮೀನು ಅತಿಕ್ರಮಣ ಮಾಡಿ ಅದರಲ್ಲಿ ಯಾವುದೇ ಮನೆ ನಿವೇಶನ ಇಲ್ಲದೆ ಅತಿಕ್ರಮಣ ಮಾಡಿದ ಭೂಮಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮನೆ ಇದೆ ಎಂದು ತೋರಿಸಿ 94c ಹಕ್ಕು ಪತ್ರವನ್ನು ಪಡೆಯುತ್ತಾರೆ. ನಕಲಿ ಎಂಬುದಕ್ಕೆ ಸ್ವಷ್ಟ ಉದಾಹರಣೆ ಹೀಗೆದೆ ನೋಡಿ ಆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆಗೆ 36 ವರ್ಷ, ಆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮದುವೆಯಾಗಿ ಬಂದು ಅಂದಾಜು 10 ವರ್ಷ, ಆದರೆ ಗ್ರಾಮ ಪಂಚಾಯತ್ ಆಕೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ 30 ವರ್ಷದಿಂದ ಮನೆ ಇದ್ದು ವಾಸ್ತವ ಇದ್ದಾರೆ ಎಂದು ನಕಲಿ ದಾಖಲೆಯನ್ನು ಕೊಡುತ್ತಾರೆ. ಕುತೂಹಲ ಕೆರಳಿಸಿದ್ದು ಆಕೆ 6 ವರ್ಷದ ಮಗು ಇದ್ದಾಗಲೇ ಮನೆ ನಿರ್ಮಾಣ ಮಾಡಿ ವಾಸ್ತವ ಆಗಿದ್ದಾರೆಯೇ ಇಂದು ಗ್ರಾಮ ಪಂಚಾಯಿತಿ ಸ್ಪಷ್ಟ ಉತ್ತರ ನೀಡಬೇಕಾಗಿದೆ.
ನಕಲಿ ನಿವೇಶನದ ಹಕ್ಕು ಪತ್ರಕ್ಕೆ ಒಮ್ಮತದ ನಿರ್ಧಾರದಿಂದ ಒಪ್ಪಿಗೆಯನ್ನು ನೀಡಿರುವ ಅದೇ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ 4 ಸದಸ್ಯರು ಒಪ್ಪಿಗೆಯನ್ನು ನೀಡಿರುತ್ತಾರೆ . ಭ್ರಷ್ಟಾಚಾರಕ್ಕೆ ಅನುವು ಮಾಡಿ ಭ್ರಷ್ಟಾಚಾರ ಮಾಡಿದ ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತನದಿಂದಲೇ ರದ್ದುಗೊಳಿಸಬೇಕು.