ಮಂಗಳೂರು,ಜು 21 (Zoom Karnataka): ರಾತ್ರಿ ವೇಳೆ ರಸ್ತೆ ಬದಿ ಸಿಕ್ಕಿದ ಬ್ಯಾಗ್, ಮೊಬೈಲ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಪತ್ರಕರ್ತರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ.
“ದೈಜಿ ವರ್ಲ್ಡ್” ವಾಹಿನಿಯ ಜೀವನ್ ಅವರು ಗುರುವಾರ ರಾತ್ರಿ ಮನೆಗೆ ಹೋಗುತ್ತಿದ್ದಾಗ ಬಿಜೈ ಕೆಎಸ್ ಆರ್ ಟಿಸಿ ಬಳಿ ಬ್ಯಾಗ್ ಒಂದು ಸಿಕ್ಕಿದ್ದು ಅದರಲ್ಲಿ ಬೆಲೆಬಾಳುವ ಮೊಬೈಲ್, ಟಾರ್ಚ್ ಲೈಟ್ ಇದ್ದು ವರಿಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಪೊಲೀಸರು ಮೊಬೈಲ್ ಹಾಗೂ ಬ್ಯಾಗ್ ಮಾಲಕರನ್ನು ಹುಡುಕುವ ಭರವಸೆ ನೀಡಿದ್ದಾರೆ. ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರ ಪ್ರಾಮಾಣಿಕತೆ ಶ್ಲಾಘನೆಗೆ ಪಾತ್ರವಾಗಿದೆ