ಕೃತಿ ಶೆಟ್ಟಿ, ಮೂಲತಃ ಕರ್ನಾಟಕದ ಬೆಡಗಿಯಾದರೂ ಸಿನಿಮಾ ಲೈಫ್ ಸ್ಟಾರ್ಟ್ ಮಾಡಿದ್ದು ತೆಲುಗು ಇಂಡಸ್ಟ್ರಿಯಲ್ಲಿ. ‘ಉಪ್ಪೇನಾ’ ಚಿತ್ರದೊಂದಿಗೆ ಟಾಲಿವುಡ್ ಎಂಟ್ರಿ ಕೊಟ್ಟ ಕೃತಿ ಮೊದಲ ಹೆಜ್ಜೆಯಲ್ಲೇ ಸಿಕ್ಸರ್ ಬಾರಿಸಿದ್ದರು. ಕೃತಿ ಹೊಡೆದ ಸಿಕ್ಸರ್ಗೆ ಡೈರೆಕ್ಟರ್, ಪ್ರೊಡ್ಯೂಸರ್ಸ್ ಇಂಪ್ರೆಸ್ ಆದರು. ಇವರ ಜೊತೆಗೆ ಹೀರೋಗಳು ಫಿದಾ ಆದರು. ಇಂಡಸ್ಟ್ರಿಗೆ ಬರ್ತಿದ್ದಂತೆ ಬಂಪರ್ ಹಿಟ್ ಬಾರಿಸಿದ ಬೇಬಮ್ಮಾ ಟಾಲಿವುಡ್ನ ಫ್ಯೂಚರ್ ಸ್ಟಾರ್ಸ್ ಅಂತ ಹೊಸ ಭರವಸೆ ಹುಟ್ಟುಹಾಕಿದ್ದರು. ಮೊದಲ ಸಿನಿಮಾದ ಇಂಪ್ಯಾಕ್ಟ್ ಕೃತಿ ಶೆಟ್ಟಿಗೆ ಸಖತ್ ಸಿನಿಮಾಗಳನ್ನೇ ತಂದು ಕೊಡ್ತು. ಬ್ಯಾಕ್ ಟು ಬ್ಯಾಕ್ ಒಳ್ಳೊಳ್ಳೆ ಅವಕಾಶಗಳನ್ನ ಕೊಡ್ತು. ನಾನಿ ಜೊತೆ ಶ್ಯಾಮ್ ಸಿಂಗ್ ರಾಯ್, ನಾಗಚೈತನ್ಯ ಜೊತೆ ಬಂಗ್ರಾರಾಜು ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಈ ಚಿತ್ರಗಳು ಬಾಕ್ಸಾಫೀಸ್ನಲ್ಲೂ ಒಂದು ಲೆವೆಲ್ಗೆ ಸದ್ದು ಗದ್ದಲ ಮಾಡಿದ್ದು ಕೃತಿಗೆ ಇನ್ನೊಂದು ಮೈಲೇಜ್ ತಂದುಕೊಡ್ತು. ಮೊದಲ ಸಿನಿಮಾ 100 ಕೋಟಿ ಕಲೆಕ್ಷನ್,
ನಂತರದ ಎರಡು ಚಿತ್ರಗಳು ಸಕ್ಸಸ್. ಜೊತೆಗೆ ಕೃತಿ ಟ್ಯಾಲೆಂಟ್, ಸೌಂದರ್ಯ ಎಲ್ಲವೂ ಪ್ಲಸ್ ಆಯ್ತು. ಒಂದು ಟೈಮಲ್ಲಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆನೂ ಓವರ್ ಟೇಕ್ ಮಾಡ್ತಾರೆ ಅಂತಾನೂ ಹೇಳಲಾಯ್ತು. ಆದ್ರೆ ಅದ್ಯಾವ ಕೆಟ್ಟ ಕಣ್ಣು ಬಿತ್ತು ಅಥವಾ ಅದೃಷ್ಟ ಕೈ ಕೊಡ್ತು ಗೊತ್ತಿಲ್ಲ ಕೃತಿ ಕೈಗೆತ್ತಿಕೊಂಡ ಚಿತ್ರಗಳು ಸೋಲು ಕಂಡವು. ರಾಮ್ ಪೋತಿನೇನಿ, ಸುಧೀರ್ ಬಾಬು, ನಿತಿನ್ ಜೊತೆ ನಟಿಸಿದ ಚಿತ್ರಗಳು ಸರತಿ ಸಾಲಾಗಿ ಫ್ಲಾಪ್ ಆದವು. ಇದು ಕೃತಿ ಕೆರಿಯರ್ಗೂ ಹೊಡೆತಾ ಬಿತ್ತು. ಈ ನಡುವೆ ಶ್ರೀಲೀಲಾ ಸ್ಟಾರ್ಡಂ ಕೂಡ ಕೃತಿಗೆ ಕಂಟಕ ಆಯ್ತು.
ಕೃತಿ ಶೆಟ್ಟಿಗೆ ಸ್ಟಾರ್ ಪುತ್ರನಿಂದ ಟಾರ್ಚರ್.! ಬೇಬಮ್ಮನನ್ನ ಕಾಡ್ತಿರೋ ಆ ಸ್ಟಾರ್ ನಟನ ಮಗ ಯಾರು? ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಸಾಧಿಸಬೇಕು, ತಾನು ಕಂಡ ಕನಸುಗಳನ್ನ ನನಸು ಮಾಡಬೇಕು ಅಂತ ಇಲ್ಲಿಂದ ತೆಲುಗು ಇಂಡಸ್ಟ್ರಿಗೆ ಹೋಗಿರೋ ಕೃತಿ ಶೆಟ್ಟಿಗೆ ಸ್ಟಾರ್ ನಟನ ಪುತ್ರನಿಂದ ಟಾರ್ಚರ್ ಶುರುವಾಗಿದ್ಯಂತೆ. ಇಂಥಹದೊಂದು ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೃತಿ ಶೆಟ್ಟಿಗೂ ಆ ವ್ಯಕ್ತಿಯ ನಡುವಳಿಕೆ ಇಷ್ಟ ಇಲ್ಲವಿಲ್ಲದಿದ್ರು ಒತ್ತಾಯದಿಂದ ಸ್ನೇಹ ಸಂಪಾದಿಸಬೇಕು ಅಂತ ಹಿಂದೆ ಬಿದ್ದಿದ್ದಾನಂತೆ. ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗೋಣ ಅಂತ ಪೀಡಿಸ್ತಿದ್ದಾನಂತೆ. ಸಿನಿಮಾ ಶೂಟಿಂಗ್ನಲ್ಲಿದ್ದರೂ ಫೋನ್ ಮಾಡಿ ಬರ್ತ್ಡೇ ಪಾರ್ಟಿಗಳಿಗೆ ಆಹ್ವಾನ ಮಾಡ್ತಾನೆ ಅಂತ ನಟಿ ಹೇಳ್ಕೊಂಡಿರೋದಾಗಿ ಸುದ್ದಿ ವೈರಲ್ ಆಗಿದ್ದು, ಸೌತ್ ಇಂಡಸ್ಟ್ರಿಗೆ ಶಾಕ್ ಕೊಟ್ಟಿದೆ. ಕೃತಿ ಶೆಟ್ಟಿಯ ರಿವೀಲ್ ಮಾಡಿರೋ ಈ ವಿಷಯ ಈಗ ಗಂಭೀರವಾಗಿ ಚರ್ಚೆಯಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಮೀಟೂ, ಕಾಸ್ಟಿಂಗ್ ಕೌಚ್ ಅಂತಹ ಅಭಿಯಾನಗಳ ಮೂಲಕ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದರೂ, ಇಂಥ ಸಮಯದಲ್ಲಿ ಸ್ಟಾರ್ ಹೀರೋಯಿನ್ಗೆ ಈ ರೀತಿ ಕಾಟ ಕೊಡ್ತಿರೋ ಆ ಸ್ಟಾರ್ ನಟನ ಪುತ್ರ ಯಾರು? ಆ ಸ್ಟಾರ್ ನಟ ಯಾರು ಅನ್ನೋ ಚರ್ಚೆ ಜೋರಾಗಿದೆ. ಬಟ್, ತನಗಾದ ಅನುಭವವನ್ನ ಧೈರ್ಯವಾಗಿ ಹೊರಗೆ ಹೇಳ್ಕೊಂಡ ಕೃತಿ ಶೆಟ್ಟಿ, ಆ ಸ್ಟಾರ್ ಯಾರು? ಅವರ ಮಗ ಯಾರು ಅನ್ನೋದನ್ನ ಬಹಿರಂಗಪಡಿಸಿಲ್ಲ. ಯಾಕಂದ್ರೆ, ಆ ಸ್ಟಾರ್ ನಟ ಇಂಡಸ್ಟ್ರಿಯಲ್ಲಿ ಪ್ರಭಾವಿ, ಒಂದು ವೇಳೆ ಹೆಸರನ್ನು ಹೇಳಿದರೆ ಅದರಿಂದ ಕೆರಿಯರ್ಗೆ ಪ್ರಾಬ್ಲಂ ಆಗಬಹುದು ಎಂಬ ಆತಂಕ ಕಾಡ್ತಿರಬಹುದು ಎನ್ನಲಾಗ್ತಿದೆ.
ಇನ್ನು ಸಿರೀಯಸ್ ಆಗಿ ನೋಡಿದ್ರೆ ಕೃತಿ ಶೆಟ್ಟಿಗೆ ತೆಲುಗಿನಲ್ಲಿ ಅವಕಾಶಗಳು ಕಮ್ಮಿಯಾಗಿದೆ. ರಿಸೆಂಟ್ ಆಗಿ ಬಿಡುಗಡೆಯಾದ ‘ಕಸ್ಟಡಿ’ ಚಿತ್ರವೂ ಹೇಳಿಕೊಳ್ಳುವ ಯಶಸ್ಸು ಕೊಡಲಿಲ್ಲ. ಹಾಗಾಗಿ ತಮಿಳಿನಿಂದ ಬರ್ತಿರುವ ಆಫರ್ಗಳನ್ನ ಒಪ್ಕೊಂಡು ಕಾಲಿವುಡ್ ಕಡೆ ಪ್ರಯಾಣ ಬೆಳೆಸಿದ್ದಾರಂತೆ. ಸದ್ಯಕ್ಕೆ ತಮಿಳು ನಟ ಸೂರ್ಯ ಮತ್ತು ಕಾರ್ತಿ ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಆದ್ರೆ ಯಾವ ಸಿನಿಮಾ ಅಂತ ಅಫಿಶಿಯಲ್ ಆಗಿ ಅನೌನ್ಸ್ ಆಗ್ಲಿಲ್ಲ. ಆ ಕಡೆ ಕೃತಿಗೆ ಟಾರ್ಚರ್ ಕೊಡ್ತಿರೋದು ತಮಿಳು ನಟನ ಮಗನೋ ಅಥವಾ ತೆಲುಗು ನಟನ ಮಗನೋ ಅನ್ನೋದ್ರ ಬಗ್ಗೆಯೂ ಕ್ಲಾರಿಟಿ ಇಲ್ಲ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತಮಿಳು ಸ್ಟಾರ್ ನಟನ ಮಗನೇ ಅಂತಾ ಗುಸುಗುಸು ಹಬ್ಬಿದೆ. ಕೃತಿ ಶೆಟ್ಟಿ ಸದ್ಯ ಸಿನಿಮಾ ಕಡೆಗಳ ಫೋಕಸ್ ಮಾಡಿದ್ದಾರೆ. ಮತ್ತೆ ಕಂಬ್ಯಾಕ್ ಆಗಬೇಕು ಅನ್ನೋ ಗುರಿಯಿಂದ ಕೆಲಸ ಮಾಡ್ತಿದ್ದು, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸ್ತಿದ್ದಾರೆ. ಈ ನಡುವೆ ಈ ಸ್ಟಾರ್ ನಟನ ಪುತ್ರನ ವಿಷಯವನ್ನು ಪಬ್ಲಿಕ್ ಮಾಡಿ ಇನ್ಡೈರೆಕ್ಟ್ ಆಗಿ ಎಚ್ಚರಿಕೆ ಕೊಟ್ಟಂತಿದೆ.