ಬೆಂಗಳೂರು,ಜು 01(Zoom Karnataka): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಏರಿಕೆಯಾದ ಪರಿಣಾಮ ಭಾರತದಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಕಳೆದೊಂದು ವಾರದಿಂದ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಇತ್ತೀಚೆಗೆ ಮೊದಲೇ ದಿನನಿತ್ಯ ಬಳಸೋ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದ ಜನರಿಗೆ ಈಗ ಪೆಟ್ರೋಲ್ ಡೀಸೆಲ್ ದರ ಶಾಕ್ ಕೊಟ್ಟಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 96.72. ಮತ್ತು ಡೀಸೆಲ್ ದರ 89.62 ರೂ. ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 106.31 ಮತ್ತು 94.27 ರೂ. ಆಗಿದೆ. ಚೆನ್ನೈನಲ್ಲಿ 102.63 ರೂ. ಪೆಟ್ರೋಲ್, 94.24 ಡೀಸೆಲ್ ರೂ. ಇದೆ. ಕೋಲ್ಕತ್ತಾದಲ್ಲಿ 106.03 ರೂ. ಪೆಟ್ರೋಲ್ ಆದರೆ ಡೀಸೆಲ್ ಬೆಲೆ 92.76 ಆಗಿದೆ. ಇನ್ನು ಪೆಟ್ರೋಲ್ ಡಿಸೇಲ್ ದರಗಳಲ್ಲಿ ಕೊಂಚ ಬದಲಾವಣೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 101.94, ಡೀಸೆಲ್ ಬೆಲೆ 87.89 ರೂಪಾಯಿ ಇದೆ.