ಬಂಟ್ವಾಳ ಜೂ 27(Zoom Karnataka) : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ಎಂಬಲ್ಲಿ ಬಡ ಕುಟುಂಬದ ಶ್ರೀಮತಿ ವಿಜಯ ಸುಂದರ ಮಡಿವಾಳ ಎಂಬವರು ಸುಮಾರು 15 ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸ್ತವ್ಯವಿದ್ದು
2017ರ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಬಿ ರಮಾನಾಥ ರೈ ಸಹಕಾರದಲ್ಲಿ ಆ ಬಡ ಕುಟುಂಬ ವಾಸವಿದ್ದ ಮನೆಗೆ ಕಾನೂನು ಬದ್ಧವಾಗಿ 94c ಹಕ್ಕು ಪತ್ರ, RTC, ಪಂಚಾಯತ್ ನೈನ್ ಲೆವೆನ್ ನೀಡಿ ರೈಯವರು ಆಸರೆಯಾಗಿದ್ದರು. ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಟ್ವಾಳದ ಬಿಜೆಪಿ ರಾಜಧರ್ಮ ಪಾಲನೆಯ
ಶಾಸಕರ ಆಪ್ತರು ಹಾಗೂ ಕೆಲವು ಅಧಿಕಾರಿಗಳು ಸೇರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಆ ಬಡ ಕುಟುಂಬದ ಮನೆಯ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಆ ಬಡ ಕುಟುಂಬಕ್ಕೆ ಸಿಗುವ ಒಂದು ವರ್ಷದಿಂದ ಅನ್ನಭಾಗ್ಯ ಯೋಜನೆಗೆ ತಡೆಹಿಡಿದಿದ್ದಾರೆ ಹಾಗೂ ಕಾನೂನು ಬಾಹಿರವಾಗಿ
ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ನೊಂದ ಬಡ ಕುಟುಂಬ ಯಾವುದೇ ದಿಕ್ಕು ತೋಚದೆ 4 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ ಬಡ ಕುಟುಂಬಕ್ಕೆ ನ್ಯಾಯವನ್ನು ಒದಗಿಸಲು ಸೂಚಿಸಿದ್ದಾರೆ. ಆದರೆ ಅಂದಿನ ಬಂಟ್ವಾಳ ತಾಲೂಕಿನ Birth ಸೌದದ ಅಧಿಕಾರಿ ವರ್ಗದವರು ಸಮರ್ಪಕ ತನಿಖೆಯನ್ನು ನಡೆಸದೆ ಬಡ ಕುಟುಂಬಕ್ಕೆ ಅನ್ಯಾಯವನ್ನು ಒದಗಿಸಿದ್ದಾರೆ. ತಕ್ಷಣವೇ ಬಂಟ್ವಾಳ ತಾಲೂಕಿನ ಅಧಿಕಾರಿ ವರ್ಗದವರು ಆ ಬಡ ಕುಟುಂಬದ ಮನೆಗೆ ಧಾವಿಸಿ ಅವರಿಗೆ ನ್ಯಾಯವನ್ನು ಒದಗಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.