Connect with us

ಮನೋರಂಜನೆ

ನಮ್ಮ ಟಿವಿಯ ಜನಪ್ರಿಯ ಕಾರ್ಯಕ್ರಮಉಂದು ನಾಟಕ…ಬಲೆ ಬುಲಿಪಾಲೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಸಾಧಕ ಮಹಿಳೆಯರಾದ ಹರೇಕಳದ ನಫೀಸ ಹಾಗೂ ಅವರ ಮಗಳು ನಜ್ರೀನ ಇತ್ತೀಚೆಗೆ ಉದ್ಘಾಟಿಸಿದರು.

Published

on

ಕರಾವಳಿ ಕರ್ನಾಟಕದ ನಾಡಿಮಿಡಿತ ನಮ್ಮ ಟಿವಿಯ ಜನಪ್ರಿಯ ಕಾರ್ಯಕ್ರಮ
ಉಂದು ನಾಟಕ…ಬಲೆ ಬುಲಿಪಾಲೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಸಾಧಕ ಮಹಿಳೆಯರಾದ ಹರೇಕಳದ ನಫೀಸ ಹಾಗೂ ಅವರ ಮಗಳು ನಜ್ರೀನ ಇತ್ತೀಚೆಗೆ ಉದ್ಘಾಟಿಸಿದರು.

ಮಂಗಳೂರು ಜೂ 20 (Zoom Karnataka): ಉಂದು ನಾಟಕ ಬಲೆ ಬುಲೆಪಾಲೆಯ 2 ಆವೃತ್ತಿಗಳು ಈಗಾಗಲೇ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಹಲವಾರು ಕಲಾವಿದರು ಮುನ್ನಡೆಗೆ ಬರುವಂತೆ ಮಾಡಿದೆ. ಮಾತ್ರವಲ್ಲದೆ ಈ ಕಾರ್ಯಕ್ರಮದ ಮೂಲಕ ಹಲವಾರು ಕಲಾವಿದರಿಗೆ ಸಿನಿಮಾಗಳಲ್ಲಿ ಅವಕಾಶಗಳು ದೊರಕಿವೆ. ಇತ್ತೀಚೆಗೆ ಇದರ ಮೂರನೇ ಆವೃತ್ತಿಯ ಚಿತ್ರೀಕರಣ ಆರಂಭಗೊಂಡಿದ್ದು, ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆಗೊಂಡಿತು.
ಬಡತನದ ಬೇಗೆಯಲ್ಲಿ ಬೆಂದರೂ ಸಾಧಿಸುವ ಛಲ ದೊಂದಿಗೆ ಹೈನುಗಾರಿಕೆಯನ್ನು ಆರಂಭಿಸಿ, ಇದೀಗ ಸುಮಾರು 75 ಗೋವುಗಳನ್ನು ಸ್ವತಹ ತಾವೇ ಸಾಕುವ ಮೂಲಕ ಯಶಸ್ಸನ್ನು ಕಂಡಿರುವ, ಮಾತ್ರವಲ್ಲದೆ ಹೈನುಗಾರಿಕೆಯಿಂದ ಬರುವ ಲಾಭಾಂಶದ ಬಹುಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿ ಮಾದರಿಯಾಗಿರುವ ಹರೇಕಳದ ನಫೀಸಾ ಮತ್ತು ಆಕೆಯ ಮಗಳು ನಜ್ರೀನಾ ಉಂದು ನಾಟಕ ಬಲಿಬುಲಿಪಾಲೆ ಮೂರನೇ ಆವೃತ್ತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಿತ್ತಲೆ ಹಣ್ಣು ಮಾರಿ ಬಂದ ದುಡ್ಡಿನಲ್ಲಿ ಶಾಲೆ ನಿರ್ಮಿಸಿ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿಕೊಟ್ಟು ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಹಾಜಬ್ಬರಿಂದಾಗಿ ರಾಜ್ಯಾದ್ಯಂತ ಸುದ್ದಿಯಾಗಿರುವ

ಹರೇಕಳ ಎಂಬ ಊರು ಇದೀಗ ಮತ್ತೊಮ್ಮೆ ಈ ಸಾಧಕ ಮಹಿಳೆಯರಿಂದ ಸುದ್ದಿಯಾಗುತ್ತಿದೆ. ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯೆಗೆ ಸಹಾಯ, ಬಡ ರೋಗಿಗಳ ಚಿಕಿತ್ಸೆಗೆ ಹಣ, ಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಗಳ ಮದುವೆಗೆ ಆರ್ಥಿಕ ನೆರವು, ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ನಫೀಸಾ ಹಾಗೂ ಅವರ ಮಗಳು ನಜ್ರೀನಾ ಇತರರಿಗೆ ಮಾದರಿಯಾಗಿದ್ದಾರೆ. ಅದರಲ್ಲೂ ನಜ್ರೀನಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದರು ಹಸು ಕರುಗಳ ಮೇಲೆ ವಿಶೇಷ ಅಕ್ಕರೆಯನ್ನು ಹೊಂದಿದ್ದು ,ಅವುಗಳ ಆರೈಕೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು ವಿಶೇಷ.
ಉಂದು ನಾಟಕ ಬಲೆ ಬಲಿಪಾಲೆಯ ತೀರ್ಪುಗಾರರಾಗಿರುವ ತುಳುರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ದಿಗ್ಗಜ ನಿರ್ದೇಶಕರಾಗಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಉದ್ಘಾಟನಾ ಸಮಾರಂಭದಲ್ಲಿ ತಾರಾ ಮೆರುಗು ನೀಡಿದರು.
ಉಂದು ನಾಟಕ ಬಲೆ ಬುಲೆಪಾಲೆಯ ಮೂರನೇ ಆವೃತ್ತಿಯ ಸ್ಪರ್ಧೆಯ ಪ್ರಥಮ ಸ್ಥಾನಿಗೆ ರೂಪಾಯಿ ಎರಡು ಲಕ್ಷ ಹಾಗೂ ದ್ವಿತೀಯ ಸ್ಥಾನಿಗೆ ರುಪಾಯಿ ಒಂದು ಲಕ್ಷ ನಗದು ಬಹುಮಾನ ದೊರೆಯಲಿದೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading