ಜಿಮ್ನಲ್ಲಿ ವರ್ಕೌಟ್ ಮಾಡುವುದು ಎಂದರೆ ಈಗಿನ ಜನರೇಷನ್ಗೆ ಫುಲ್ ಫ್ಯಾಶನ್. ಸಖತ್ ಆಗಿ ಜಿಮ್ ಮಾಡಿ ಬೈ ಚಿಪ್ಸ್, ಚೆಸ್ಟ್, ಶೋಲ್ಡರ್, ತೈಸ್ ಬಲಗೊಳಿಸಿ ನೋಡಲು ಆಕರ್ಷಣೆಯಾಗಿರಬೇಕು ಎನ್ನುವುದು ಯಂಗ್ಸ್ಟಾರ್ಸ್ಗಳ ಮಹಾದಾಸೆ. ಜಿಮ್ ಮಾಡುವುದೇನು ತಪ್ಪಿಲ್ಲ.. ಆದ್ರೆ ಕೆಲವೊಮ್ಮೆ ಇದು ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಅದು ಬೇರೆ ದೇಹ ಪ್ರಮುಖ ಅಂಗಗಳೇ ಅಪಾಯಕ್ಕೆ ಒಳಗಾಗುತ್ತಾವಂತೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಅತಿಯಾದ ವರ್ಕೌಟ್ ರೋಗನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತೆ. ಇದರಿಂದ ದೇಹದೊಳಿಗಿನ ಮೂಳೆಗಳು ಹಾನಿಯಾಗುವ ಸಂಭವವಿರುತ್ತದೆ. ವರ್ಕೌಟ್ ಮಾಡುತ್ತ ಹೋದಂತೆ ನಮಗೆ ಹುಮ್ಮಸ್ಸು ಜಾಸ್ತಿಯಾಗಿ ಇನ್ನಷ್ಟು ಮಾಡಬೇಕು ಎಂಬ ಆಸೆ ಹುಟ್ಟುತ್ತದೆ. ಆಗ ನಾವು ಅದನ್ನು ಕಂಟ್ರೋಲ್ ಮಾಡಿ, ದಿನ ಮಾಡಿದಷ್ಟೇ ಅಥವಾ ಅದಕ್ಕಿಂತ ಕಡಿಮೆಯೇ ಮಾಡಬೇಕು. ನಿರಂತರ ವರ್ಕೌಟ್ನಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾವೆ.
ವರ್ಕೌಟ್ ಮಾಡುವಾಗ ನಮ್ಮ ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದರಿಂದ ನಮಗೆ ನಿದ್ದೆ ಸಮಸ್ಯೆ ತಲೆದೋರುತ್ತದೆ. ಜಿಮ್ನಲ್ಲಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಪ್ರತಿ ನಿತ್ಯ ಉತ್ತಮ ಪೌಷ್ಠಿಕಾಂಶದ ಆಹಾರವನ್ನು ಒದಗಿಸಬೇಕು. ಕೇವಲ ಜಿಮ್ ಮಾಡಿ ಅನ್ನ, ಸಾಂಬಾರ್ ಸೇವಿಸಿದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜಿಮ್ ಮಾಡಿದ್ರೂ ಸೋರಗುತ್ತಿದ್ದೇನಲ್ಲ ಎಂಬ ಖಿನ್ನತೆಗೆ ಒಳಗಾಗಬಹುದು. ದಿನಲೂ ಹೆಚ್ಚಿಗೆ ನಿದ್ದೆ ಮಾಡಿದ್ರು ಹೆಚ್ಚಿನ ವರ್ಕೌಟ್ ಶರೀರದಲ್ಲಿ ಆಯಾಸ ಉಂಟುಮಾಡಿ ತಲೆನೋವು, ತಲೆಸುತ್ತು, ಹಸಿವಿನ ತೊಂದರೆ ಬರುತ್ತಾವೆ. ನಾವು ತಿನ್ನುವ ಆಹಾರಕ್ಕೆ ಅನುಗುಣವಾಗಿ ನಮ್ಮ ದೇಹಕ್ಕೆ ಬೇಕಾದ ವ್ಯಾಯಾಮ ಮಾಡಿ ಉತ್ತಮ ಆರೋಗ್ಯವಂತರಾಗಬೇಕು.
ಅತಿಯಾದ ಜಿಮ್ನಿಂದಾಗಿ ಹಾರ್ಮೋನ್ಗಳಲ್ಲಿ ಅಸಮತೋಲವಾಗಿ ದಣಿವು ಹೆಚ್ಚಾಗುತ್ತದೆ. ಇದರಿಂದ ನಿಶಕ್ತಿಗೆ ಬಿದ್ದಂತೆ ಆಗುತ್ತದೆ. ಅಂದರೆ ಯಾವುದೇ ಕೆಲಸದಲ್ಲಿ ಉತ್ಸಹ ಇರುವುದಿಲ್ಲ. ಯಾರೇ ಆಗಲಿ ಜಿಮ್ಗೆ ಜಾಯಿನ್ ಆಗುವ ಮುನ್ನ ವೈದ್ಯರಿಂದ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ನಂತರ ಜಿಮ್ ಮಾಡುವುದು ಒಳ್ಳೆಯದು. ನಿಮಗೆ ಮೊದಲೇ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೇ ಜಿಮ್ ಮಾಡಬಹುದೇ ಬೇಡವೇ ಎಂದು ಒಮ್ಮೆ ಡಾಕ್ಟರ್ ಹಾಗೂ ಜಿಮ್ ತರಬೇತುದಾರಿಂದ ಸಲಹೆ ಪಡೆಯಬೇಕು. ಹೆಚ್ಚು, ಹೆಚ್ಚಾಗಿ ವರ್ಕೌಟ್ ಮಾಡುವುದರಿಂದ ರಕ್ತದೊತ್ತಡವನ್ನು ಹೆಚ್ಚುತ್ತದೆ. ರಕ್ತದೊತ್ತಡವು ಹೃದಯದ ಮೇಲೆ ಪರಿಣಾಮ ಬೀರಿ ಹೃದಯ ಸಂಬಂಧಿ ಕಾಯಿಲೆ ಜೊತೆ ಜೀವಕ್ಕೆ ಅಪಾಯವು ಆಗಬಹುದು. ನಗರದಂತಹ ಪ್ರದೇಶಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಉದ್ಯಾನ ಹಾಗೂ ಜಿಮ್ಗಳಲ್ಲಿ ವರ್ಕೌಟ್ ಮಾಡುವುದು ಮನಸಿಗೆ ಕಿರಿ ಕಿರಿ ಎನಿಸಬಹುದು.