ಸ್ಯಾಂಡಲ್‌ವುಡ್‌ನ ರ‍್ಯಾಂಬೋ ಬೆಡಗಿ ಆಶಿಕಾ ರಂಗನಾಥ್ ಅವರು ಸದ್ಯ ಕನ್ನಡದ ಜೊತೆಗೆ ತೆಲುಗು- ತಮಿಳು ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ. ಈ ನಡುವೆ ಕಾರ್ಯಕ್ರಮವೊಂದರಲ್ಲಿ ನಟಿ ಆಶಿಕಾ ಅವರು ತಮ್ಮ ಲೈಫ್ ಪಾರ್ಟನರ್ ಹೇಗಿರಬೇಕು ಎಂದು ಬಣ್ಣಿಸಿದ್ದಾರೆ. ಯಶ್ ತರ ಗಂಡ ಇರಬೇಕು ಎಂದು ಹೇಳಿಕೊಂಡಿದ್ದಾರೆ.
‘ಕ್ರೇಜಿ ಬಾಯ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಆಶಿಕಾ ರಂಗನಾಥ್, ಮುಗುಳುನಗೆ, ಮಾಸ್ ಲೀಡರ್, ರ‍್ಯಾಂಬೋ 2, ತಾಯಿಗೆ ತಕ್ಕ ಮಗ, ಮದಗಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ‘ಕೋಟಿಗೊಬ್ಬ-3’ನಲ್ಲಿ ಆಶಿಕಾ ರಂಗನಾಥ್, ಕಿಚ್ಚ ಸುದೀಪ್ ಜೊತೆ ಪಟಾಕಿ ಪೋರಿ ಹಾಡಿಗೆ ಸೊಂಟ ಬಳುಕಿಸಿದ್ದರು.
ಇತ್ತೀಚಿನ ಅವಾರ್ಡ್ ಕಾರ್ಯಕ್ರಮದಲ್ಲಿ ಯಂಗ್ ಸ್ಟಾರ್ ಐಕಾನ್ ಪ್ರಶಸ್ತಿಯೂ ಆಶಿಕಾ ರಂಗನಾಥ್‌ಗೆ ಲಭಿಸಿದೆ. ನಟಿ ಪ್ರಶಸ್ತಿ ಪಡೆದು ತುಂಬಾ ಖುಷಿಯಾಗಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಪ್ರಶಸ್ತಿ ಪಡೆದ ನಂತರ ನಿರೂಪಕ ನಿರಂಜನ್ ದೇಶಪಾಂಡೆ ಅವರು ನಿಮ್ಮ ಬಾಯ್ ಫ್ರೆಂಡ್ ಯಾವ ರೀತಿ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಆಶಿಕಾ, ನಮ್ಮ ನಡುವೆ ತುಂಬಾ ಹೊಂದಾಣಿಕೆ ಇರಬೇಕು. ಪ್ರೀತಿ ತೋರಿಸಬೇಕು ಎಂದು ಆಶಿಕಾ ಹೇಳಿದ್ದಾರೆ.
ನಿರಂಜನ್ ಸ್ಯಾಂಡಲ್‌ವುಡ್‌ನ ಹೀರೋ ಫೋಟೋಗಳನ್ನು ಹಾಕಿ. ಇದರಲ್ಲಿ ನಿಮ್ಮ ಮದುವೆ ಆಗೋ ಹುಡುಗ ಯಾವ ರೀತಿ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಆಶಿಕಾ, ಯಶ್ ಸರ್ ತರ ಗಂಡ ಇರಬೇಕು ಎನ್ನಿಸುತ್ತೆ ಎಂದಿದ್ದಾರೆ. ನಾನು ಇವರನ್ನು ಓಡಿ ಹೋಗಿ ಪ್ರಪೋಸ್ ಮಾಡ್ತೀನಿ ಅಂದ್ರೆ ಯಾರನ್ನ ಎಂದು ನಿರೂಪಕ ಕೇಳಿದ್ದಾರೆ. ಅದಕ್ಕೆ ಆಶಿಕಾ, ಧ್ರುವ ಸರ್ಜಾ ಎಂದು ಹೇಳಿದ್ದಾರೆ.
ಚಂದನವನದ ಬೆಸ್ಟ್ ಜೋಡಿ ಯಶ್- ರಾಧಿಕಾ ಪಂಡಿತ್ ಅವರದ್ದು ಹಲವು ವರ್ಷಗಳು ಪ್ರೀತಿಸಿ ಬಳಿಕ ಮದುವೆ ಆಗಿದ್ದಾರೆ. ಅಲ್ಲದೇ ಇತರೆ ಜೋಡಿಗಳಿಗೆ ಮಾದರಿ ಆಗಿದ್ದಾರೆ. ಅವರ ರೀತಿ ಗಂಡ ಇರಬೇಕು ಎಂದುಕೊಳ್ಳುವುದು ಸಹಜ ಬಿಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.