ಶಿವಮೊಗ್ಗ, ಜೂ 17 (Zoom Karnataka): ಕಾಂಗ್ರೆಸ್ ನಾಯಕರು ಬಡವರ ಓಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಿ. ನಿಮಗೆ ಬಡವರ ಶಾಪ ತಟ್ಟೇ ತಟ್ಟುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಆಗಿದೆ. ಈ ಸರಕಾರ ನೇರವಾಗಿ ಹಿಂದೂ ವಿರೋಧಿ. ಬಡಜನರಿಗೆ ಮೋಸ ಮಾಡುವ ಸರಕಾರ. ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದರು. ಕೇಂದ್ರ ಸರಕಾರ ಐದು ಕೆಜಿ ಕೊಡುತ್ತಿತ್ತು. ಚುನಾವಣೆಯಲ್ಲಿ ಗ್ಯಾರಂಟಿ ಕೊಡುವ ಸಂದರ್ಭದಲ್ಲಿ ಮೋದಿ ಅವರಿಗೆ ಈ ಬಗ್ಗೆ ಕೇಳಿದ್ಧರೆ? ಅವರಿಗೆ ಕೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ವಾಗತ ಮಾಡ್ತೇನೆ. ಖಾಸಗಿ ಬಸ್ ಮುಚ್ಚುವ ಸ್ಥಿತಿ, ಆಟೋ ಚಾಲಕರಿಗೆ ಹೊಟ್ಟೆಗೆ ಅನ್ನ ಇಲ್ಲ.ಖಾಸಗಿ ಬಸ್, ಆಟೋದವರಿಗೂ ಉಚಿತ ಕೊಡಿ. ಹೆಣ್ಣು ಮಕ್ಕಳಿಗೆ ಹಣ ಕೊಡುತ್ತೇವೆ ಅಂತೇಳಿ ಅರ್ಜಿ ಹಾಕೋದನ್ನೇ ಮುಂದು ಹಾಕ್ತಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲೇ ಎಲ್ಲಾ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಅಂದರು. ಸರಕಾರ ಬಂದು ಒಂದು ತಿಂಗಳು ಆದರೂ ಕೊಟ್ಟಿಲ್ಲ. ಎಲ್ಲರಿಗೂ ಮೋಸ ಮಾಡಿ ಅಧಿಕಾರಕ್ಕೆ ಬಂದರು ಎಂದು ವಾಗ್ದಾಳಿ ನಡೆಸಿದ್ದಾರೆ.