ಹೆತ್ತ ತಾಯಿಯನ್ನೇ ಕೊಂದು ಸೂಟ್ ಕೇಸ್ನಲ್ಲಿಟ್ಟು ಠಾಣೆಗೆ ಬಂದ ಪಾಪಿ ಮಗಳು
ಬೆಂಗಳೂರು, ಜೂ13(Zoom Karnataka) ಹೆತ್ತ ತಾಯಿಯನ್ನ ದೇವರಿಗೆ ಹೋಲಿಸುತ್ತಾರೆ. ಅಷ್ಟೇ ಏಕೆ ತಾಯಿಯನ್ನ ಪೂಜಿಸುತ್ತಾರೆ. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಯನ್ನೇ ಕೊಂದು ಬಳಿಕ ಸೂಟ್ ಕೇಸಲ್ಲಿ ಶವಹೊತ್ತು ಸ್ಟೇಷನ್ ಗೆ ಬಂದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 70 ವರ್ಷದ ತಾಯಿ ಬೀವಾ ಪಾಲ್ ಕೊಲೆಯಾಗಿರುವ ವೃದ್ಧೆ.
ಬಿಳೇಕಳ್ಳಿಯ ಎನ್ ಎಸ್ ಆರ್ ಗ್ರೀನ್ ಅಪಾರ್ಟ್ ಮೆಂಟ್ ವಾಸವಾಗಿದ್ದ ಸೊನಾಲಿ ಸೇನ್ (39) ತನ್ನ ತಾಯಿಯನ್ನ ಕೊಲೆ ಮಾಡಿರುವ ಆರೋಪಿ. ಕೊಲೆ ಮಾಡಿದ ಬಳಿಕ ಸೊನಾಲಿ ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿ ಶವವಿಟ್ಟು , ತಂದೆಯ ಫೋಟೊ ಇಟ್ಟು ಸ್ಟೇಷನ್ ಗೆ ಬಂದಿದ್ದಾಳೆ. ಮೈಕೊಲೇಔಟ್ ಪೊಲೀಸ್ ಠಾಣೆಗೆ ತಾಯಿಯ ಮೃತದೇಹ ತೆಗೆದುಕೊಂಡು ಬಂದಿದ್ದಾಳೆ.
ತಾಯಿಯನ್ನು ಕೊಂದಿದ್ದೇಕೆ?
ಸೊನಾಲಿ ಸೇನ್ ಅಮ್ಮ ಮತ್ತು ಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರು ಕೂಡ ದಿನಾ ಗಲಾಟೆ ಮಾಡುತ್ತಿದ್ದರಂತೆ. ಬೀಗರ ಜಗಳಕ್ಕೆ ಬೇಸತ್ತ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾಳೆ. ಆದರೆ ಮಗಳು ಸೊನಾಲಿ ನಿನ್ನೆ ಮುಂಜಾನೆ ತಾಯಿಗೆ 20 ನಿದ್ರೆ ಮಾತ್ರೆ ನುಂಗಿಸಿದ್ದಾಳೆ.
ನಿದ್ರೆ ಮಾತ್ರೆ ನುಂಗಿಸಿದ ಬಳಿಕ ತಾಯಿ ಹೊಟ್ಟೆ ನೋವು ಎಂದು ಹೇಳುತ್ತಾಳೆ. ಆ ವೇಳೆ ಸೆನಾನಿ ವೇಲ್ ನಿಂದ ಅಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತಾಯಿಯ ಮೃತದೇಹದೊಂದಿಗೆ ಮಗಳು ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಸೊನಾಲಿ ಸೇನ್ ಕೃತ್ಯ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೊಲೆ ಆರೋಪಿ ಸೊನಾಲಿ ಸೇನ್ಳನ್ನು ಬಂಧಿಸಿದ್ದಾರೆ