ಇದೇ ಶುಕ್ರವಾರ ಅಂದ್ರೆ ಜೂನ್ 2 ತಾರೀಖ ಬಿಡುಗಡೆಯಾಗುತ್ತಿರವ ಸಿನಿಮಾ ಬಾರಿಸು ಕನ್ನಡ ಡಿಂಡಿಮವ ಈ ಚಲನಚಿತ್ರವು ನ್ಯಾಷನಲ್ ರೆಕಾರ್ಡ್ ಮಾಡಿರುವ ಸಿನಿಮಾ ಅಷ್ಟೇ ಅಲ್ಲದೇ ಸಾಕಷ್ಟು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳನ್ನೂ ಬಾಚಿವೆ.
ವಿಶೇಷ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಲ್ಲಿ ತಯರಾಗಿದ್ದು ಈ ಚಿತ್ರ ಕ್ಕೆ ಸಹಾ ನಿರ್ಮಾಪಕಿಯಾಗಿ ಅಶ್ವಿಕ ಮೈಸೂರು ಬಂಡವಾಳ ಹೂಡಿಕೆ ಮಾಡಿದರೆ ಕಾರ್ಯಕಾರಿ ನಿರ್ಮಾಪಕಿಯಾಗಿ ಶ್ರೀಮತಿ ರಾಜೇಶ್ವರಿ ಸುಂದರಮೂರ್ತಿ ಸಾಥ್ ನೀಡಿದ್ದಾರೆ. ನವಿಲುಗರಿ ನವೀನ್ ಪಿ ಬಿ ಯವರು ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿ ಕೂಡ ಈ ಚಿತ್ರದಲ್ಲಿ ದುಡಿದ್ದಿದ್ದಾರೆ. ಸಂಗೀತ ಮನರಾಜ್ ನೀಡಿದರೆ ಗಾಯನ ಸುನಿಲ್ ರಾವ್, ಮುರಳಿ ಮೋಹನ್, ಜೋಗಿ ಸುನೀತಾ, ಶಾಲಿನಿ ಎಸ್ ರಾಮ್ ಹಾಗೂ ದೀಪಿಕಾ ಬಾಲ ಮುರಳಿ ಕೃಷ್ಣ ಹಾಡಿದ್ದಾರೆ ಮುಖ್ಯ ಭೂಮಿಕೆ ಎಲ್ಲಿ ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇ ಗೌಡರು, ಶ್ರೀಮತಿ ಗಿರಿಜಾ ಲೋಕೇಶ್, ರಮಣ ಕಣಗಾಲ್, ಖುಷಿ ಹೆಚ್,ಲೇಖನ ಚಿಕ್ಕಹಳ್ಳಿ, ನಿರಂತ್ ಸೂರ್ಯ, ವರ್ಷ ವಿ ಮೇಟಿ, ಪ್ರತೀಕ್ಷಾ, ರಿಷಿರಾಜ್, ಮಣಿ, ಸಂದೀಪ್ ಮಾಲನಿ, ಹರಿಣಿ ನಟರಾಜ್, ಹೆಚ್ ಎನ್ ಸ್ವಾಮಿ ಶರತ್, ಶೋಭಾ, ಕಮಲ ಕಣ್ಣನ್, ಹಾಗೂ ಇನ್ನೂ ಅನೇಕರು ನಟಿಸಿದ್ದಾರೆ ಈ ಸಿನಿಮಾ ಬಹಳಷ್ಟು ಹಿರಿಯ ನಿರ್ದೇಶಕರ ಮನಸ್ಸು ಗೆದ್ದು ಇರುವ ಈ ಸಿನಿಮಾವನ್ನು ಸಹನ ಆರ್ಟ್ಸ್ ವಿಡಿಯೋ ಒಟಿಟಿ ಮೂಲಕ ಹೊರತರುತ್ತಿದ್ದಾರೆ ಎಲ್ಲರೂ ನೋಡಿ ಚಿತ್ರ ತಂಡಕ್ಕೆ ಆಶೀರ್ವಾದ ನೀಡಿ ಎಂದು ನಿರ್ದೇಶಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು