ಬೆಂಗಳೂರು(ಮೇ 25): ಚುನಾವಣಾ (Karnataka Elections) ಹೈಡ್ರಾಮಾ ಮುಗಿದ ಬೆನ್ನಲ್ಲೇ ಇದೀಗ ಅಪರಾಧ ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ಸದ್ಯ ಬೆಂಗಳೂರಿಲ್ಲಿ ತಡರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ (Murder) ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹೌದು ರವಿ ಅಲಿಯಾಸ್ ಮತ್ತಿರವಿ (42) ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ (Congress Supporter). ಲಗ್ಗೆರೆ ಬಳಿಯ ಚೌಡೇಶ್ವರಿನಗರದಲ್ಲಿ ರಾತ್ರಿ ವೇಳೆ ಈ ಕೊಲೆ ಪ್ರಕರಣ ನಡೆದಿದೆ.
ಚೌಡೇಶ್ವರಿನಗರದ ಹಳ್ಳಿರುಚಿ ಹೊಟೇಲ್ ಮುಂಭಾಗ ಕೈ ಕಾರ್ಯಕರ್ತನ ಕೊಲೆ ನಡೆದಿದ್ದು, ಸಿಎಂಹೆಚ್ ಬಾರ್ ಬಳಿಯಿಂದ ರವಿಯನ್ನ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಕೊನೆಗೆ ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸಾಲದೆಂಬಂತೆ ಆತನ ತಲೆಯ ಮೇಲೆ ಸೈಜ್ ಕಲ್ಲು ಎತ್ತಾಕಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಬೈಕ್ಗಳಲ್ಲಿ ಬಂದ ಐದಾರು ಮಂದಿ ಈ ಕೃತ್ಯ ಎಸಗಿದ್ದಾರೆ. ಇನ್ನು ಹತ್ಯೆಗೂ ಮುನ್ನ ಹಂತಕರು ಈ ಏರಿಯಾದಲ್ಲಿ ಹಾಕಿದ್ದ ಪ್ಲೆಕ್ಸ್ಗಳಲ್ಲಿದ್ದ ರವಿಕುಮಾರ್ ಪೋಟೋ ಹರಿದು ಹಾಕಿದ್ದರು.