ಪುತ್ತೂರಿನಲ್ಲಿ ಪೋಲಿಸ್ ದೌರ್ಜನ್ಯದಿಂದ ಗಾಯಗೊಂಡಿರುವ ಹಿಂದೂ ಕಾರ್ಯಕರ್ತರನ್ನು ನಟಿ ಹರ್ಷಿಕಾ ಪೂನಚ್ಚ ಭೇಟಿ ಮಾಡಿದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ನಟಿ ಹರ್ಷಿಕಾ ಪೂನಚ್ಚ ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.ಗಾಯಾಳು ಯುವಕರಿಗೆ ಸಾಂತ್ವನ ಹೇಳಿದ ನಟಿ ಹರ್ಷಿಕಾ ಪೂನಚ್ಚ ಗಾಯಾಳುಗಳು ಶೀಘ್ರ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.ಈ ವೇಳೆ ನಿರ್ದೇಶಕ ವಿನು ಬಳಂಜ ಜೊತೆಗಿದ್ದರು