ಆಸ್ಟ್ರೇಲಿಯಾದಲ್ಲಿ ಐಎಡಿಎಫ್ ಸಿಡ್ನಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ನಮ್ಮ ಬಹುಸಂಸ್ಕೃತಿಯ ಸಮುದಾಯದ ಪ್ರಮುಖ ಭಾಗ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಐಎಡಿಎಫ್ನ ಸಹ-ಸಂಸ್ಥಾಪಕ ಡಾ ಅಮಿತ್ ಸರ್ವಾಲ್, ಕಾರ್ಯಕ್ರ ನಡೆಯುವ ಸ್ಥಳದ ಹೊರಗೆ ಬಹಳಷ್ಟು ಜನರು ಕಾಯುತ್ತಿದ್ದಾರೆ, ಅಲ್ಲಿ ಅವರು ಪ್ರಧಾನಿ ಮೋದಿಗಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೆಲ್ಬೋರ್ನ್/ಸಿಡ್ನಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸುಮಾರು 170 ಭಾರತೀಯ ಮೂಲದ ಜನರು ಮೆಲ್ಬೋರ್ನ್ನಿಂದ ಸಿಡ್ನಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ. ಈ ಕ್ವಾಂಟಾಸ್ ವಿಮಾನ ಇಂದು ಬೆಳಗ್ಗೆ ವಿಮಾನ ಸಿಡ್ನಿ ತಲುಪಿದೆ.ಭಾರತೀಯ ಆಸ್ಟ್ರೇಲಿಯನ್ ಡಯಾಸ್ಪೊರಾ ಫೌಂಡೇಶನ್ (IADF) ಸದಸ್ಯರು ತ್ರಿವರ್ಣ ಪೇಟಗಳನ್ನು ಧರಿಸಿ ಮತ್ತು ರಾಷ್ಟ್ರಧ್ವಜಗಳನ್ನು ಬೀಸುತ್ತಾ, ಪ್ರಧಾನಿಯವರ ಬೆಂಬಲಿಗರು ಮೋದಿ ಏರ್ವೇಸ್ ಎಂದು ಹೆಸರಿಸಿದ ವಿಮಾನವನ್ನೇರಿದ್ದಾರೆ. ವಿಮಾನ ಹತ್ತುವ ಮುನ್ನ ಪ್ರಯಾಣಿಕರು ನೃತ್ಯ ಮಾಡುತ್ತಾ ಸಂತೋಷ ವ್ಯಕ್ತ ಪಡಿಸಿದರು.
ಆಸ್ಟ್ರೇಲಿಯಾದಲ್ಲಿ ಐಎಡಿಎಫ್ ಸಿಡ್ನಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ನಮ್ಮ ಬಹುಸಂಸ್ಕೃತಿಯ ಸಮುದಾಯದ ಪ್ರಮುಖ ಭಾಗ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಐಎಡಿಎಫ್ನ ಸಹ-ಸಂಸ್ಥಾಪಕ ಡಾ ಅಮಿತ್ ಸರ್ವಾಲ್, ಕಾರ್ಯಕ್ರ ನಡೆಯುವ ಸ್ಥಳದ ಹೊರಗೆ ಬಹಳಷ್ಟು ಜನರು ಕಾಯುತ್ತಿದ್ದಾರೆ, ಅಲ್ಲಿ ಅವರು ಪ್ರಧಾನಿ ಮೋದಿಗಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪ್ರಧಾನಿ ಮೋದಿಯವರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಾಳೆ ನಡೆಯಲಿರುವ ದ್ವಿಪಕ್ಷೀಯ ಸಭೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ನವೀಕರಿಸಬಹುದಾದ ಇಂಧನ ಮತ್ತು ರಕ್ಷಣಾ ಮತ್ತು ಭದ್ರತಾ ಸಹಕಾರದ ಕುರಿತು ನಾಯಕರು ಚರ್ಚಿಸಲಿದ್ದಾರೆ.
ಮೋದಿ ಪಪುವಾ ನ್ಯೂಗಿನಿಯಾದಿಂದ ಇಲ್ಲಿಗೆ ಆಗಮಿಸಿದರು, ಅಲ್ಲಿ ಅವರು ತಮ್ಮ ಸಹವರ್ತಿ ಜೇಮ್ಸ್ ಮರಾಪೆ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ಅವರ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು.
ಉಭಯ ನಾಯಕರು ಸೋಮವಾರದಂದು ಫೋರಂ ಫಾರ್ ಇಂಡಿಯಾ-ಪೆಸಿಫಿಕ್ ದ್ವೀಪಗಳ ಸಹಕಾರ (ಎಫ್ಐಪಿಐಸಿ) ಶೃಂಗಸಭೆಯನ್ನು ಸಹ-ಆತಿಥ್ಯ ವಹಿಸಿ, ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸಿದರು.
ಪ್ರಧಾನಿ ಮೋದಿ ಅವರು ಶುಕ್ರವಾರ ಜಪಾನ್ನಿಂದ ಮೂರು ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರ ಆಹ್ವಾನದ ನಂತರ ಜಿ 7 ಶೃಂಗಸಭೆಯಲ್ಲಿ ಮೂರು ಅಧಿವೇಶನಗಳಲ್ಲಿ ಭಾಗವಹಿಸಿದರು.