‘ಜೊತೆ ಜೊತೆಯಲಿ’ ಧಾರಾವಾಹಿಯ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದ ನಟಿ. ಇದೀಗ ಈ ವಾರ ಧಾರಾವಾಹಿ ಕೊನೆಯಾಗಲಿದ್ದು, ಮೇಘಾ ಶೆಟ್ಟಿ ಕಿರುತೆರೆಯಿಂದ ಹಿರಿತೆರೆಗೆ ಹಾರಲು ಸಜ್ಜಾಗಿದ್ದಾರೆ. ‘ಇನ್ನುಮುಂದೆ ಹೆಚ್ಚಾಗಿ ಸಿನಿಮಾಗಳತ್ತ ಗಮನ ಹರಿಸಲಿದ್ದೇನೆ. ನಾಲ್ಕು ವರ್ಷಗಳ ಪಯಣ ಇನ್ನೇನು ಮುಗಿಯಲಿದೆ. ಇತ್ತೀಚೆಗಷ್ಟೆ ಕೊನೆಯ ಎಪಿಸೋಡ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ನಾಲ್ಕು ವರ್ಷ ಹೇಗೆ ಉರುಳಿತು ಎಂಬುದೇ ಗೊತ್ತಾಗಲಿಲ್ಲ. ಧಾರಾವಾಹಿ ಪ್ರಾರಂಭವಾದ ಮೊದಲ ಶಾಟ್‌ನಲ್ಲಿ ನಾನಿದ್ದೆ, ಹಾಗೇ ಕೊನೆಯ ಶಾಟ್‌ನಲ್ಲೂ ನಾನಿರಲಿದ್ದೇನೆ. ನಾಲ್ಕು ವರ್ಷಗಳಿಂದ ಪ್ರತಿದಿನ ಮನೆಯಿಂದ ಹೊರಟರೆ ಧಾರಾವಾಹಿ ಸೆಟ್, ಅಲ್ಲಿಂದ ಹೊರಟರೆ ಮನೆ ಅಷ್ಟೇ ಆಗಿತ್ತು. ನನ್ನ ಎರಡನೇ ಮನೆಯಂತಿತ್ತು ಧಾರಾವಾಹಿ ಸೆಟ್. ಅದ್ಭುತ ಅನುಭವಗಳು, ನೆನಪುಗಳು ನನ್ನೊಂದಿಗಿವೆ. ಅಪಾರ ಅಭಿಮಾನಿಗಳನ್ನು ನೀಡಿದ ಧಾರಾವಾಹಿ. ಹಾಗಂತ ಇನ್ನುಮುಂದೆ ಸೀರಿಯಲ್‌ಗಳಲ್ಲಿ ನಟಿಸುವುದಿಲ್ಲ ಅಂತಲ್ಲ. ‘ಜೊತೆ ಜೊತೆಯಲಿ’ ಧಾರಾವಾಹಿಯಂತೆಯೇ ಉತ್ತಮ ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುತ್ತೇನೆ’ ಎಂದು ಸ್ಮರಿಸಿಕೊಳ್ಳುತ್ತಾರೆ ಮೇಘಾ.
ಎರಡು ಚಿತ್ರಗಳು ಸಿದ್ಧ
ಕಳೆದ ವರ್ಷ ತೆರೆಗೆ ಬಂದ ‘ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಮೇಘಾ, ನಟಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ರೆಡಿಯಾಗುತ್ತಿವೆ. ‘ಆಫ್ಟರ್ ಆಪರೇಷನ್ ಲಂಡನ್ ಕೆೆ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೆರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಅದರ ಜತೆ ಜಯತೀರ್ಥ ಸರ್ ನಿರ್ದೇಶಿಸಿರುವ ‘ಕೈವ’ ರಿಲೀಸ್‌ಗೆ ರೆಡಿಯಿದೆ. ‘ಪಾತ್ರದ ಬಗ್ಗೆ ಏನೂ ಹೇಳಬೇಡಿ ಎಂದು ಎರಡೂ ಚಿತ್ರತಂಡದವರು ಹೇಳಿದ್ದಾರೆ. ಹೀಗಾಗಿ ಹೆಚ್ಚೇನೂ ಹೇಳುವುದಿಲ್ಲ. ‘‘ಕೈವ’ ಚಿತ್ರದಲ್ಲಿ ಮುಗ್ಧ ಹುಡುಗಿಯ ಪಾತ್ರವಾದರೂ, ರ್ಪಾಮೆನ್ಸ್‌ಗೆ ಪ್ರಾಮುಖ್ಯತೆಯಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು ‘ಆಫ್ಟರ್ ಆಪರೇಷನ್ ಲಂಡನ್ ಕೆೆ’ ಚಿತ್ರದಲ್ಲಿ ಮುಗ್ಧ, ಸರಳ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಮೇಘಾ ಮಾಹಿತಿ ನೀಡುತ್ತಾರೆ.
ಪರಭಾಷೆಗಳಲ್ಲೂ ಇತ್ತು
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಮೇಘಾ ಶೆಟ್ಟಿಯವರಿಗೆ ಪರಭಾಷೆಗಳಿಂದ ಕೆಲವು ಅವಕಾಶಗಳು ಬಂದಿದ್ದವಂತೆ. ‘ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸಲು ಆರ್ ಬಂದಿತ್ತು. ಆದರೆ, ಆಗ ನಾನು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೇ ಬಿಜಿಯಿದ್ದೆ, ಹೀಗಾಗಿ ಆ ಧಾರಾವಾಹಿಗಳನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಧಾರಾವಾಹಿ ಮುಗಿದಿರುವ ಕಾರಣ, ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ, ಖಂಡಿತ ನಟಿಸುತ್ತೇನೆ, ಕಲಾವಿದರಿಗೆ ಭಾಷೆಯ ಗಡಿಯಿಲ್ಲ’ ಎಂದು ಹೇಳಿಕೊಳ್ಳುತ್ತಾರೆ ಮೇಘಾ ಶೆಟ್ಟಿ.ಸದ್ಯದಲ್ಲೇ ಹೊಸ ಚಿತ್ರ ಘೋಷಣೆ
ಕಿರುತೆರೆ ಪಯಣಕ್ಕೆ ಬ್ರೇಕ್ ಬಿದ್ದ ಬೆನ್ನಲ್ಲೇ ಇದೀಗ ಮೇಘಾ ಶೆಟ್ಟಿ ಸಂಪೂರ್ಣವಾಗಿ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಹೊಸ ಹೊಸ ಕಥೆಗಳನ್ನು ಕೇಳುತ್ತಿರುವ ಅವರು, ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹಿರಿಪರದೆ ಮೇಲೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು, ಅಭಿಮಾನಿಗಳನ್ನು ರಂಜಿಸಬೇಕು ಎಂದು ಉತ್ಸುಕರಾಗಿದ್ದಾರೆ.