ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ವೈ ಕೆಟಗರಿ ಭದ್ರತೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮಂಗಳವಾರ Z ಕೆಟಗರಿ ಭದ್ರತೆ ನೀಡಲು ಪಶ್ಚಿಮ ಬಂಗಾಳ ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಗಂಗೂಲಿ ಅವರ ವಿವಿಐಪಿಯ ಭದ್ರತಾ ಅವಧಿ ಕೊನೆಗೊಂಡಿರುವುದರಿಂದ ಪ್ರೊಟೋಕಾಲ್ ಪ್ರಕಾರ ಪರಿಶೀಲನೆ ಮಾಡಿ, Z ವರ್ಗಕ್ಕೆ ನೀಡಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೊಸ ಭದ್ರತಾ ವ್ಯವಸ್ಥೆ ಪ್ರಕಾರ, ಸೌರವ್ ಗಂಗೂಲಿಗೆ 8 ರಿಂದ 10 ಪೊಲೀಸ್ ಸಿಬ್ಬಂದಿಯ ಕಾವಲು ಇರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗಂಗೂಲಿ ಮೇ. 21ರಂದು ಕೋಲ್ಕತ್ತಾಗೆ ಬರಲಿದ್ದು, ಅಂದಿನಿಂದ ಅವರಿಗೆ ಝಡ್ ವರ್ಗದ ಭದ್ತೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ, ರಾಜ್ಯಪಾಲ ಸಿವಿ ಆನಂದ ಬೋಸ್ ಮತ್ತು ತೃಭಮೂಲ ಕಾಂಗ್ರೆಸ್ ಸಂಸದ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇವರಿಗೆಲ್ಲ Zಪ್ಲಸ್ ಭದ್ರತೆ ಒದಗಿಸಲಾಗಿದೆ.