ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ಗ್ರಾಮಗಳಿಗೆ ಆನೆಗಳ ಹಿಂಡು ಬರುತ್ತಿದ್ದು ಅದರ ಮುಂದುವರಿದ ಭಾಗವಾಗಿ ಪುಂಡಾನೆಯೋಂದು ಮೇವನ್ನು ಅರಸಿ ಎಲ್ಲೇಂದರಲ್ಲಿ ನುಗ್ಗುತ್ತಿದೆ ಇದರಿಂದ ಜನರು ತಮ್ಮ ಪ್ರಾಣಭಯದಿಂದ ವಾಸಿಸುವಂತಾಗಿದೆ.
ಹನೂರು ತಾಲ್ಲೋಕಿನ
ಪೊನ್ನಾಚಿ ಗ್ರಾಮದಲ್ಲಿ ಪುಂಡಾನೆಯ ದಾಳಿ ಯಥೇಚ್ಛವಾಗಿದ್ದು ಮನೆಮನೆ ಮುಂದೇನೆ ಬರುತ್ತಿದೆ .ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಪುಂಡನೆಯಿಂದ ನಾವುಗಳು ಜಮೀನುಗಳು ಮತ್ತು ಯಾವುದೇ ತರದ ಸಸ್ಯಗಳು ತಂಗಿನ ಮರಗಳನ್ನು ಸಾಕಲು ಆಗುತ್ತಿಲ್ಲ ಜನರು ಈ ಪುಂಡನೆಗಳ ದಾಳಿಗೆ ಬೆದರಿ ಊರು ಬಿಟ್ಟು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ.ಆದ್ದರಿಂದ ದಯಮಾಡಿ ಅರಣ್ಯ ಅಧಿಕಾರಿಗಳು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ಅನಾಹುತಗಳಿಗೆ ನೇರವಾಗಿ ಅರಣ್ಯ ಇಲಾಖೆಯೆ ಜವಾಬ್ದಾರರಾಗುತ್ತಾರೆ, ಹಾಗೂ ರೈತರಿಗಾಗಿರುವ ನಷ್ಟ ಪರಿಹಾರವನ್ನು ಅರಣ್ಯಾಧಿಕಾರಿಗಳೇ ಬರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಸವ್ಯಕ್ತಪಡಿಸಿದರು .