ಗಂಗಾವತಿ : ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ಧನ ರೆಡ್ಡಿಯವರು ಮತ್ತು ಬಳ್ಳಾರಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಅರುಣಾ ರವರ ನೇತೃತ್ವದಲ್ಲಿ ನಗರದ ಕನಕಗಿರಿ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
ವೇದಿಕೆ ಉದ್ಘಾಟಿಸಿ ಮಾತನಾಡಿದ ಜನಾರ್ಧನ ರೆಡ್ಡಿಯವರ ನಮ್ಮ ಪಕ್ಷದಿಂದ ನನ್ನ ಸೇರಿ ಎಲ್ಲಾ ಅಭ್ಯರ್ಥಿಗಳು ಜನಪರ ಕಾರ್ಯಕ್ರಮ ಮುಂದಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸಲಾಗುವುದು. ವಿಜಯನಗರ ಸಾಮ್ರಾಜ್ಯ ಕಟ್ಟಿದ ಗಂಡು ಮೆಟ್ಟಿದ ಈ ಗಂಗಾವತಿಯೇ ನನ್ನ ಕರ್ಮಭೂಮಿ ಎಂದು ನಿರ್ಧಾರ ಮಾಡಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು. ನಾನು ತಮ್ಮ ಸೇವಗೆ ಸದಾಕಾಲವೂ ಸಿದ್ದ. ನಾನು ಇದುವರೆಗೂ ಮಾತಾಡಿದ್ದು ಮಾಡಿದೀನಿ ಮಾಡೋದೇ ಮಾತಾಡ್ತಿನಿ, ಎದುರಾಳಿಗಳ ತರಹ ನಾನು ಮಾತು ತಪ್ಪುವ ವ್ಯಕ್ತಿಯಲ್ಲ. ಕೊಟ್ಟ ಮಾತು ತಪ್ಪುವ ಪರಿಸ್ಥಿತಿ ಬಂದರ ನನ್ನ ಪ್ರಾಣ ಬಿಡ್ತಿನಿ ಹೊರತು ಮಾತು ತಪ್ಪುವುದಿಲ್ಲ. ಇಂದಿನವರೆಗೂ ನಾನು ಹೊಂದಾಣಿಕೆ ರಾಜಕೀಯ ಮಾಡಿಲ್ಲ ಇನ್ಮುಂದೆ ಮಾಡುವುದು ಇಲ್ಲ. ಕೇವಲ ನನ್ನ ನಂಬಿದ ನಿಮ್ಮ ಜೊತೆ ಹೊಂದಾಣಿಕೆ ಮಾತ್ರ ಮಾಡ್ತಿನಿ. ಅಧಿಕಾರ ಆಸೆಗಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ಆಂದ್ರಪ್ರದೇಶದ ವೈಎಸ್ಆರ್ ಜಗನ್ ಮೋಹನ್ ರೆಡ್ಡಿ ತೆಲಂಗಾಣದ ಪ್ರಾದೇಶಿಕ ಪಕ್ಷದ ತರಹ 2028 ಚುನಾವಣೆಯಲ್ಲಿ ನಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಭಗವಂತನ ಮತ್ತು ನಿಮ್ಮಗಳ ಅರ್ಶಿವಾದದಿಂದ 150 ಸೀಟುಗಳನ್ನು ಗೆಲ್ಲುವ ಮೂಲಕ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಗಂಗಾವತಿಯಿಂದ ಡೆಲ್ಲಿವರೆಗೂ ಆಡಳಿತವನ್ನು ನಡೆಸುತ್ತವೆ ಎಂದು ಆತ್ಮವಿಶ್ವಾಸದಿಂದ ಕರೆಕೊಟ್ಟರು. ಗಂಗಾವತಿ ನಗರದಲ್ಲಿ ಯಾವುದೇ ಜಾತಿ ಧರ್ಮದ ಭೇದ ಭಾವ ಇಲ್ಲದಂತೆ ಶಾಂತಿ ನೆಮ್ಮದಿಯನ್ನು ನೆಲೆಸುವ ಮೂಲಕ ಮಹಾನಗರವನ್ನಾಗಿ ಮಾಡಲು ಪಣತೊಟ್ಟಿರುವೆ.
ಈ ಸಂದರ್ಭದಲ್ಲಿ ರೆಡ್ಡಿಯವರ ಪುತ್ರಿ ಬ್ರಹ್ಮೀಣಿ, ಅಳಿಯ ರಾಜೀವ ರೆಡ್ಡಿ ಜೊತೆಗೆ ಹಾಲುಮತ ಸಮಾಜದ ಹಿರಿಯ ಹಾಗು ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ, ಲಿಂಗಾಯತ ಸಮಾಜದ ಹಿರಿಯರಾದ ಸಿಂಗನಾಳ್ ಪಂಪಾಪತಿ, ರಾಜ್ಯ ಯುವಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ್, ಜಿಲ್ಲಾಧ್ಯಕ್ಷ ಮನೋಹರ ಗೌಡ, ವಿರೇಶ್ ಬಲ್ಕುಂದಿ, ದುರುಗಪ್ಪ ಆಗೊಲಿ, ಪ್ರಚಾರ ಸಮಿತಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ಅಲ್ಪಸಂಖ್ಯಾತ ಮುಖಂಡ ಸೈಯದ್ ಜಿಲಾನಿ ಪಾಷ ಖಾದ್ರಿ, ಸೈಯದ್ ಅಲಿ, ಆನಂದ ಗೌಡ, ಚಂದ್ರಶೇಖರ ಹಿರೂರು, ಸಂಗಮೇಶ ಬಾದವಾಡಗಿ ಇನ್ನೂ ಮುಂತಾದ ಹಿರಿಯ ಕಿರಿಯ ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.