ಹಗರಿಬೊಮ್ಮನಹಳ್ಳಿ: ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮೀಸಲು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪರ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಎಸ್.ಸಿ.ಮೀಸಲು ಕ್ಷೇತ್ರವಾದ ಹಗರಿಬೊಮ್ಮನಹಳ್ಳಿಯಲ್ಲಿ ಬೇಡ ಜಂಗಮ ಸಮಾಜದ ಡಾ.ಎ.ಎಮ್.ಎ.ಸುರೇಶ ಕುಮಾರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು ,ತಮ್ಮ ಬೆಂಬಲಿಗರೊಂದಿಗೆ ಹೇರೂರ ಪ್ರಚಾರ ಕೈಗೊಂಡಿದ್ದಾರೆ.
ಡಾ.ವಿಲಾಸ ಮರಿಯಮ್ಮನಹಳ್ಳಿ , ಫ಼ಾರ್ಮಾ ಪದವೀಧರರಾದ ಲೋಹಿತ್ ಐಲಿ ಗಂಗಾವತಿ ಮತ್ತು ಲೋಕೇಶ ಹಗರಿಬೊಮ್ಮನಹಳ್ಳಿ ಇವರುಗಳ ಜೊತೆಯಲ್ಲಿ ಬಸಯ್ಯಸ್ವಾಮಿ ಶಿವನಗುತ್ತಿ ,ಸುರೇಶ್ ಕೀರ್ತನಾ ಫ಼ಾರ್ಮಾ, ಸುರೇಶ್ ಡಣಾಪೂರ, ಕಲ್ಯಾಣರಾವ್,ಸಿ.ಚಿದಾನಂದ,ನ್ಯಾಯವಾದಿ ರಮೇಶ್ ಕೊಟ್ಟೂರು,ರಾಜಶೇಖರಯ್ಯ ಭಾನಾಪೂರ,ಮಲ್ಲಯ್ಯ ಹೇರೂರ ಮತ್ತು ಶ್ರೀಮತಿ ಸಂಧ್ಯಾ ಪಾರ್ವತಿ ಹೇರೂರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ ಹಾಗೂ ಹೊಸಪೇಟೆ ರಸ್ತೆಗಳಲ್ಲಿ ಅಭ್ಯರ್ಥಿ ಡಾ.ಸುರೇಶ ಅವರ ಪರವಾಗಿ ಕರಪತ್ರಗಳನ್ನು ಹಂಚುವ ಮೂಲಕ ಅವರನ್ನು ಬೆಂಬಲಿಸಲು ಮತದಾರರನ್ನು ಕೋರಿದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮರೆಯಮ್ಮನಹಳ್ಳಿ ಮತ್ತು ಕೊಟ್ಟೂರು ಪಟ್ಟಣಗಳಲ್ಲಿಯೂ ಅಶೋಕಸ್ವಾಮಿ ಹೇರೂರ ಪ್ರಚಾರ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.